- Views 1618
- Likes
ಉಡುಪಿ:ಕೃಷ್ಣ ಮಠಗಳಲ್ಲಿ ಒಂದಾದ ಶೀರೂರು ಮಠದ ಉತ್ತರಾಧಿಕಾರಿ ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿ ಧಾರ್ಮಿಕ ಕಾರ್ಯಕ್ರಮಗಳು ಮಂಗಳವಾರ, ಮೇ.11,2021 ರಂದು ಶಿರೂರು ಮೂಲ ಮಠದಲ್ಲಿ ಆರಂಭಗೊಂಡಿತು.


ಚಿ.ಅನಿರುದ್ಧ ಸರಳತ್ತಾಯರು ಶೀರೂರು ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ನಿಯೋಜನೆಗೊಳ್ಳಲಿದ್ದು , ಪಟ್ಟಾಭಿಷೇಕ ಮಹೋತ್ಸವದ ಪೂರ್ವಭಾವಿಯಾಗಿ ದೇವತಾ ಪ್ರಾರ್ಥನೆ , ವಟುವಿಗೆ ಫಲ ಪ್ರದಾನ ಹಾಗೂ (ಗಣಪತಿ ಹೋಮ,ಬ್ರಹ್ಮಕೂರ್ಚ ಹೋಮ,ಪವಮಾನ ಪೂಯಮಾನ ಮಂಡಲ ಹೋಮ,ಧನ್ವಂತರಿ ಹೋಮ,ನವಗ್ರಹ ಹೋಮ,ತಿಲಹೋಮ) ಪ್ರಾಯಶ್ಚಿತ್ತ ಯಾಗಾದಿ ಕರ್ಮಾಂಗಗಳು ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥರ ಉಪಸ್ಥಿತಿಯಲ್ಲಿ ಶೀರೂರು ಮೂಲ ಮಠದಲ್ಲಿ ನಡೆಯಿತು.
ಅವಧಾನಿ ಸುಬ್ರಹ್ಮಣ್ಯ ಭಟ್ಟ ಹಾಗೂ ವಿದ್ವಾನ್ ಗಿರಿರಾಜ ಉಪಾಧ್ಯಾಯರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ದಿವಾನರಾದ ಶ್ರೀನಿವಾಸ ತಂತ್ರಿಗಳು ಹಾಗೂ ವಟುವಿನ ಪೋಷಕರಾದ ಶ್ರೀಮತೀ ಶ್ರೀವಿದ್ಯಾ ಮತ್ತು ವಿದ್ವಾನ್ ಉದಯಕುಮಾರ ಸರಳತ್ತಾಯರು ಉಪಸ್ಥಿತರಿದ್ದರು.
