- Views 1363
- Likes
ಬೆಂಗಳೂರು : ಕೋವಿಡ್ ಸೋಂಕಿಗೆ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕಿರಣ್ ಮೃತಪಟ್ಟಿದ್ದಾರೆ.ಕೆಲ ದಿನಗಳ ಹಿಂದೆ ಕಿರಣ್ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ದುಃಖದ ವಿಚಾರವನ್ನು ಸಹೋದರನ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

“ಕೋವಿಡ್ ಸೋಂಕಿನಿಂದಾಗಿ ನನ್ನ ಪ್ರೀತಿಯ ಸಹೋದರನನ್ನು ಕಳೆದುಕೊಂಡೆ. ಕಿರಣ್, ನೀನಿಲ್ಲದ ನನ್ನ ನೋವನ್ನು ಹೇಗೆ ವ್ಯಕ್ತಪಡಿಸಬೇಕೆಂದು ನನಗೆ ತಿಳಿಯುತ್ತಿಲ್ಲ. ನಾನು ಉಸಿರಾಡುವವರೆಗೂ ನೀನು ನನ್ನ ಉಸಿರಾಟದಲ್ಲಿರುತ್ತೀಯ’’ ಎಂದು ಬರೆದುಕೊಂಡಿದ್ದಾರೆ.