- Views 1155
- Likes
ಕಾಸರಗೋಡು, ಮೇ 3 : ಕೋವಿಡ್ ಹೆಚ್ಚಳ ಹಿನ್ನೆಲೆಯಲ್ಲಿ ಮೇ 9 ವರೆಗೆ ಅನಿವಾರ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಚಟುವಟಿಕೆಗಳಿಗೂ ಕಟ್ಟು ನಿಟ್ಟಿನ ಕ್ರಮ ಇರಲಿದೆ.ಕೇಂದ್ರ- ರಾಜ್ಯ ಸರಕಾರಿ ಸಂಸ್ಥೆಗಳು, ಅವುಗಳ ಸ್ವಾಮ್ಯದಲ್ಲಿರುವ ಸ್ಥಳೀಯಾಡಳಿತ ಸಂಸ್ಥೇಗಳು, ಅನಿವಾರ್ಯವಿಭಾಗಗಳು, ಕೋವಿಡ್ ಪ್ರತಿರೋಧ ಚಟುವಟಿಕೆಗಳಲ್ಲಿ ಭಾಗಿಒಯಾಗಿರುವ ಸಿಬ್ಬಂದಿ, ವ್ಯಕ್ತಿಗಳು ಮೊದಲಾದವರ ಚಟುವಟಿಕೆಗಳಿಗೆತಡೆಯಿಲ್ಲ. ಉಳಿದಂತೆ ಸಂಸ್ಥೆಗಳಲ್ಲಿ ಅನಿವಾರ್ಯ ಸಿಬ್ಬಂದಿ ಮಾತ್ರ ಹಾಜರಾಗಬೇಕು. ಇಂಥಾ ಸಂಸ್ಥೇಗಳಲ್ಲಿ ಅಗತ್ಯಕ್ಕಿಂತ ಅಧಿಕಸಿಬ್ಬಂದಿ ಇರುವರೇ ಎಂಬ ಬಗ್ಗೆ ಸೆಕ್ಟರಲ್ ಮೆಜಿಸ್ಟ್ರೇಟ್ ತಪಾಸಣೆ ನಡೆಸುವರು.ಅನಿವಾರ್ಯ ಸೇವೆ ಸಂಬಂಧ ಕಂಪನಿಗಳು, ಉದ್ದಿಮೆ ಸಂಸ್ಥೆಗಳು, ಸಂಘಟನೆಗಳು ಸಹಿತ 24 ತಾಸೂ ಚಟುವಟಿಕೆ ನಡೆಸಬಹುದು.

ಟೆಲಿಕಾಂ ಸರ್ವೀಸ್, ಮೂಲಬೂತ ಸೌಲಭ್ಯ, ಇಂಟರ್ ನೆಟ್ ಸೇವೆದಾತರು, ಪೆಟ್ರೋನೆಟ್,ಪೆಟ್ರೋಲಿಯಂ, ಎಲ್.ಪಿ.ಜಿ. ಯೂನಿಟ್ ಗಳು ಇತ್ಯಾದಿಗಳನ್ನು ಸೇವೆ ವಿಭಾಗದಲ್ಲಿ ಅಳವಡಗೊಳಿಸಲಾಗಿದೆ. ಇವರು ಆಯಾಸಂಸ್ಥೆಗಳು ನೀಡುವ ಗುರುತುಚೀಟಿ ಸಹಿತ ಪ್ರಯಾಣಿಸಬಹುದು. ರೋಗಿಗಳು, ಅವರ ಜತೆಗಿರುವವರು, ತುರ್ತು ಪರಿಸ್ಥಿತಿಯಲ್ಲಿಆಸ್ಪತ್ರೆ ಫಾರ್ಮಸಿಗಳು, ಪತ್ರಿಕಾ ಮಾಧ್ಯಮಗಳು, ಹಾಲು- ಹಾಲು ಉತ್ಪನ್ನಗಳು ಇತ್ಯಾದಿ ಕೇಂದ್ರಗಳು, ಮೀನು-ಮಾಂಸಮಾರಾಟ ಕೇಂದ್ರಗಳು, ಶೇಂದಿ ಅಂಗಡಿಗಳು ಇತ್ಯಾದಿ ಮಾತ್ರ ಚಟುವಟಿಕೆ ನಡೆಸಬಹುದು. ಸಾರ್ವಜನಿಕರು ಮನೆಯಿಂದಹೊರಗಿಳಿದು ಸಾಮಾಗ್ರಿ ಖರೀದಿ ಮಾಡುವುದಕ್ಕಿಂತ ಹೋಂ ಡೆಲಿವರಿ ವ್ಯವಸ್ಥೆಗಳಿಗೆ ಪ್ರೋತ್ಸಾಹ ನೀಡಬೇಕು.ಎಲ್ಲ ಸಂಸ್ಥೇಗಳಲ್ಲಿ ಸಿಬ್ಬಂದಿ, ಮಾಲೀಕರು ಅವಳಿ ಮಾಸ್ಕ್ ಧರಿಸಬೇಕು. ರಾತ್ರಿ 9 ಗಂಟೆಗೆ ಮುನ್ನಅಂಗಡಿಗಳು ಮುಚ್ಚುಗಡೆಗೊಳ್ಳಬೇಕು. ರೆಸ್ಟಾರೆಂಟ್ ಗಳಲ್ಲಿ, ಆಹಾರ ಸಂಸ್ಥೆಗಳಲ್ಲಿ ಪಾರ್ಸೆಲ್ ವಿತರಣೆ ಮಾತ ಅನುಮತಿಯಿದೆ.ಇಂಥಾ ಸಂಸ್ಥೆಗಳೂ ರಾತ್ರಿ 9 ಗಂಟೆಗೆ ಮುಚ್ಚುಗಡೆಗೊಳ್ಳಬೇಕು.ಬ್ಯಾಂಕ್ ಗಳು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ವರೆಗೆ ಮಾತ್ರ ಸಾರ್ವಜನಿಕರಿಗಾಗಿ ಚಟುವಟಿಕೆ ನಡೆಸಲಿವೆ.ಬ್ಯಾಂಕ್ ಗಳು ತಮ್ಮ ಚಟುವಟಿಕೆ ಪೂರ್ಣಗೊಳಿಸಲು ಮಧ್ಯಾಹ್ನ 2 ಗಂಟೆ ವರೆಗೆ ಸಮಯ ಅನುಮತಿ ನೀಡಲಾಗುವುದು. ಜನ ಗರಿಷ್ಠಮಟ್ಟದಲ್ಲಿ ಇಂಟರ್ ನೆಟ್ ಬ್ಯಾಂಕಿಂಗ್ ಬ್ಯಾಂಕಿಂಗ್ ಬಳಸಬೇಕು.ದೂರಗಾಮಿ ಬಸ್ ಗಳು, ರೈಲು, ಸಾರ್ವಜನಿಕ ಸಂಚಾರಿ ವ್ಯವಸ್ಥೆ ಇತ್ಯಾದಿ ಚಟುವಟಿಕೆಗಳಿಗೆ ಅನುಮತಿಯಿದೆ.ಆದರೆ ಇವುಗಳಲ್ಲಿ ಸಂಚಾರ ನಡೆಸುವ ವೇಳೆ ಕೋವಿಡ್ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರಯಾಣಿಕರ ಬಳಿಯಾತ್ರೆ ಸಂಬಂಧ ದಾಖಲಾತಿ ನಿಖರವಾಗಿರಬೇಕು. ವಿವಾಹ ಸಂಬಂಧ ಸಮಾರಂಭಗಳಲ್ಲಿ ಗರಿಷ್ಠ 50 ಮಂದಿ, ಮರಣಾನಂತರಸಮಾರಮಭಗಳಲ್ಲಿ ಗರಿಷ್ಠ 20 ಮಂದಿ ಬಾಗವಹಿಸಬಹುದು. ಪಡಿತರ ಅಂಗಡಿಗಳು ತೆರೆದು ಕಾರ್ಯಾಚರಿಸಬಹುದು. ಇತರರಾಜ್ಯಗಳ ಕಾರ್ಮಿಕರು ಕೋವಿಡ್ ಸಂಹಿತೆಗಳನ್ನು ಪಾಲಿಸಿ ಕಾಯಕ ನಡೆಸಬಹುದು. ಆರಾಧನಾಲಯಗಳಲ್ಲಿ ಗರಿಷ್ಠ 50 ಮಂದಿಇರಬಹುದು. ಆದರೆ ಆರಾಧನಾಲಯಗಳ ವಿಸ್ತಾರ ನೋಡಿಕೊಂಡು ಇದರಲ್ಲಿ ವ್ಯತ್ಯಾಸ ಇರಬಹುದು.