- Views 2974
- Likes
ಮಂಗಳೂರು: ತಾರೀಖು 29-06-2016ರಂದು ವಿಕಾಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಾದ ಶಿವನಗೌಡ ಬಿ. ಮತ್ತು ಕುಸುಮ ಇವರನ್ನು ಸನ್ಮಾನಿಸಲಾಯಿತು. ಈ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಜೂನ್ 27ರಂದು ನಡೆದ ಅಂತರಾಷ್ಟ್ರೀಯ ಯೋಗ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಪಡೆದಿದ್ದರು.
ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಉತ್ತಮ ಮನುಷ್ಯರಾಗಲು ಯೋಗ ಒಂದು ಕೀಲಿಕೈ ಇದ್ದ ಹಾಗೆ. ವಿಕಾಸ್ ಕಾಲೇಜಿನಲ್ಲಿ ನಾನೂ ಒಂದು ಭಾಗವಾಗಿದ್ದೇನೆ ಎನ್ನುವುದು ಸಂತೋಷದ ವಿಷಯ. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಅಧ್ಯಕ್ಷ ಸ್ಥಾನವನ್ನು ಮಾಜಿ ಸಚಿವರೂ, ಹಾಗೂ ಕಾಲೇಜಿನ ಸ್ಥಾಪಕ ಅಧ್ಯಕ್ಷರೂ ಆಗಿರುವ ಶ್ರೀಯುತ ಜೆ.ಕೃಷ್ಣ ಪಾಲೆಮಾರ್ ವಹಿಸಿದ್ದರು. ಸಲಹೆಗಾರರಾದ ಡಾ|ಅನಂತ್ಪ್ರಭು ಜಿ., ಉಪಪ್ರಾಂಶುಪಾಲೆ ಶ್ರೀಮತಿ ಮೋಹನಾ ಆರ್. ಉಪಸ್ಥಿತರಿದ್ದರು.ಉಪನ್ಯಾಸಕರಾದ ಶ್ರೀಯುತ ಲಕ್ಷ್ಮೀಶ್ ಭಟ್ ನಿರೂಪಿಸಿದರು.