- Views 2095
- Likes
ಮೂಡುಬಿದಿರೆ:ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ಸೂಬಗನು ಸವಿಯಲ್ಲು ಪ್ರೇಕ್ಷಕರು ಮುಂದಾಗಿದ್ದಾರೆ. ಕನ್ನಡಿಗರ ಮನಸ್ಸು ಕ್ರಿಯಾಶೀಲತೆಯನ್ನಾಗಿ ಹುಟ್ಟಿಸುವಂತೆ ಮಾಡಿತ್ತು ಆಳ್ವಾಸ್ ನುಡಿಸಿರಿ. ನುಡಿಸಿರಿ ಮೂರು ದಿನಗಳು ಒಂದು ನಿಮಿಷವೂ ಬಿಡುವಿಲ್ಲದೆ ಕಾರ್ಯಕ್ರಮಗಳು ಬೆಳಗ್ಗೆ ೫.೩೦ ರಿಂದ ಪ್ರಾರಂಭವಾದ ಉದಯರಾಗವು ರಾತ್ರಿ ೧೦ ಗಂಟೆತನಕ ವೀಕ್ಷಿಸುತ್ತಿದ್ದಾರೆ. ಮೂರನೇ ದಿನ ನಡೆಯುವ ಆಳ್ವಾಸ್ ನುಡಿಸಿರಿಯಲ್ಲಿ ೮೦ ಸಾವಿರಕ್ಕಿಂತ ಅಧಿಕ ಜನಸಾಗರ ಹರಿದು ಬರುತ್ತಿರುವ ದೃಶ್ಯ ಕಂಡು ಬಂದಿದೆ.
ಕನ್ನಡ ನಾಡು ನುಡಿಯ ಹಬ್ಬಕ್ಕೆ ಬಂದಿರುವ ೧೫೦ಕ್ಕೂ ಹೆಚ್ಚು ವಿಶೇಷ ಕಲಾ ಪ್ರದರ್ಶನಗಳು ಮುಂದಾದವು, ನಾಡಿನ ಹಬ್ಬಕ್ಕೆ ಬಂದಿರುವ ಪ್ರೇಷಕರು ಕಲಾ ಪ್ರದರ್ಶನ ವಿಕ್ಷಿಸಲು ದಾಪುಗಾಲು ಹಾಕಿದರು. ಇಲ್ಲಿನ ವಿಶೇಷತೆ ಎಂದರೆ ಆಳ್ವಾಸ್ ನುಡಿಸಿರಿಯಲ್ಲಿ ಆಳ್ವಾಸ್ ಆರೋಗ್ಯ ಉಚಿತ ತಪಸಣೆ ಕೇಂದ್ರ ನಡೆಸಿಕೊಡುವಲ್ಲಿ ಮುಂದಾಗಿದ್ದಾರೆ.
ಆಳ್ವಾ ಫಾರ್ಮಸಿ : ಆಳ್ವಾಸ್ ನುಡಿಸಿರಿ ಸಾಂಸ್ಕೃತಿ ಸೂಬಗು, ವಿಚಾರಗೋಷ್ಠಿ, ಕವಿನಮನ ಜೊತೆ ಜೊತೆಗೆ ನುಡಿಸಿರಿಯಲ್ಲಿ ಡಾ. ಎಂ ಮೋಹನ್ ಆಳ್ವರವರು ಆಶ್ರಯದಲ್ಲಿ ಪ್ರತ್ಯೇಕವಾಗಿ ಉಚಿತ ಆರೋಗ್ಯ ತಪಾಕ್ಷಣೆ ಕೇಂದ್ರ ನಡೆಸಿಕೊಡುತ್ತಿದ್ದಾರೆ. ನುಡಿಸಿರಿಗೆ ಬಂದಿರುವ ಪ್ರೇಕ್ಷಕರಿಗೆ ಉಚಿತ ಸಾಂಸ್ಕೃತಿ ಜೊತೆಗೆ ಉಚಿತ ಆರೋಗ್ಯ ತಪಾಸಣೆ ನಡೆಸಿಕೊಡುತ್ತಿದ್ದಾರೆ. ನುಡಿಸಿರಿಗೆ ಬಂದಿರುವ ವೀಕ್ಷಕರಿಗೆ ವಿಶೇಷವಾಗಿರುವುದರಿಂದ ಎಲ್ಲ ಪ್ರೇಕ್ಷಕರು ಚಿಕಿತ್ಸೆಗಾಗಿ ಸಾರಧಿ ಸಾಲು ಗಟ್ಟಿ ನಿಂತಿರುವ ದೃಶ್ಯ ಕಂಡುಬಂದಿದೆ. ಚಿಕಿತ್ಸೆಯಾದ ನಂತರ ಯಾವುದೇ ರೀತಿಯಿಂದ ಔಷಧಿಯನ್ನು ಹೊರಗಡೆ ತೆಗೆದುಕೊಳ್ಳುವಂತಿಲ್ಲ, ಪಕ್ಕದಲ್ಲಿ ಚಿಕಿತ್ಸೆ ಔಷಧಿಯನ್ನು ಏರ್ಪಡಿಸಲಾಯಿತ್ತು. ಆಳ್ವರು ತಮ್ಮದೆ ಆದ ಫಾರ್ಮಸಿನಿಂದ ತಯಾರಿಸಿದ ಆಯುರ್ವೇದ ಔಷಧಿಯನ್ನು ಮಾರಾಟಕ್ಕೆ ಇಡಲಾಗಿದೆ.
ಇನ್ನೊಂದು ವಿಶೇಷತೆ ಎಂದರೆ ಆಳ್ವಾ ಫಾರ್ಮಸಿ ನಿಂದ ತಯಾರಿಸಿದ ಆಯುರ್ವೇದ ಔಷಧಿಯನ್ನು ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತಿದೆ. ಫಾರ್ಮಸಿ ನಿಂದ ವಿವಿಧ ರೋಗಗಳಿಗೆ ವಿವಿಧ ಔಷಧಿಯನ್ನು ತಯಾರಿಸುವುದನ್ನು ಕಂಡು ಬಂದಿದೆ ಅವುಗಳೆಂದರೆ ಸುಶ್ವಾಸ (ಸಿರಪ್/ಮಾತ್ರೆ), ಕಾಲಮೇಘ (ಸಿರಾಪ್), ಕಾಲು ನೋವುಗಳಿಗೆ (ಗಂಧಕಮಲಹರ), ವಿವಿಧ ಮುಟ್ಟಿ ಸಂಬಂಧಿತಕ್ಕೆ ಅಮೃತಾರಿಷ್ಟ, ಈಗೇ ಒಟ್ಟಿನಲ್ಲಿ ಸುಮಾರು ೩೦ಕ್ಕಿಂತ ಅಧಿಕ ಔಷಧಿಯನ್ನು ಆಳ್ವಾಸ್ ಫಾರ್ಮಸಿ ನಿಂದ ತಯಾರಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾರಾಟ ಮಾಡಲಾಗುತ್ತಿದ್ದಾರೆ. ಇಂತಹ ಗಿಡಮೂಲಿಕೆ ಔಷಧಿಯನ್ನು ನುಡಿಸಿರಿಗೆ ಬರುವ ಎಲ್ಲ ಪ್ರೇಕ್ಷಕರಿಗೆ ಸಿಗಲಿ ಎಂಬ ಕಾರಣಕ್ಕೆ ಉಚಿತ ಚಿಕಿತ್ಸೆಗೆ ಗಿಡಮೂಲಿಕೆ ಔಷಧಿ ಮಾರಾಟ ಮಾಡಲಾಗುತ್ತದೆ. ಇಲ್ಲಿ ಉಚಿತ ಚಿಕಿತ್ಸಗಾಗಿ ೬ ನರ್ಸಂಗ್ ಒಬ್ಬ ಡಾಕ್ಟರ್ ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಹೇಳಿನ ಡಾಕ್ಟರ್ ಹೇಳಿದರು.
ರಾಮಕೃಷ್ಣ.ಕೆ ಶಿಡಿಗಿನಮೊಳ