- Views 2165
- Likes
ಮೂಡುಬಿದಿರೆ: ಆಳ್ವಾಸ್ ನುಡಿಸಿರಿ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನದಲ್ಲಿ ಗುರುವಾರದಂದು ನಡೆದ ಆಳ್ವಾಸ್ ವಿದ್ಯಾ ಸಿರಿಯಲ್ಲಿ ವಿದ್ಯಾರ್ಥಿಗಳೇ ಹೆಚ್ಚಿನವರು ಭಾಗವಹಿಸಿದ್ದರಿಂದ ಆಳ್ವಾಸ್ ವಿದ್ಯಾಸಿರಿ ಒಂದು ಹೆಮ್ಮೆಯ ವಿಷಯವಾಗಿದೆ. ಆಳ್ವಾಸ್ ನುಡಿಸಿರಿಗೆ ಬರುವವರು ಎಲ್ಲಾ ಪ್ರೇಷಕರಿಗೆ ಸಾಹಿತ್ಯಿಕ ಜೊತೆಗೆ ಸಾಂಸ್ಕೃತಿ ಕಾರ್ಯಕ್ರಮ ಸೂಬಗನ್ನು ಸವಿದರು.
ಏಂಟು ವೇದಿಕೆಯಲ್ಲಿ ಒಂದು ವೇದಿಕೆ ಕವಿಗಳ ಕವಿಗೋಷ್ಠಿಗಳ ನಮನ, ಇನ್ನು ೭ ವೇದಿಕೆಯ ಸುತ್ತ ಸಾಂಸ್ಕೃತಿ ಕಾರ್ಯಕ್ರಮ ಸೂಬಗನ್ನು ಪ್ರೇಷಕರು ಕಣ್ಣ್ ಸಳೆದುಕೊಂಡರು. ಆಳ್ವಾಸ್ ನುಡಿಸಿರಿಗೆ ಬರುವ ಪ್ರೇಷಕರು, ವಿದ್ಯಾರ್ಥಿಗಳು, ಕವಿ ವಿಚಾರಗೋಷ್ಠಿಗಳ ಮಾತಿನಿಂದ ಹೊಸತನದ ಹುಡುಕಾಟದಲ್ಲಿ ಕನ್ನಡಿಗರು ತಳ್ಳಿಲನ್ನಾಗಿ, ವಿದ್ಯಾರ್ಥಿ ಸಿರಿಯಲ್ಲಿ ವಿದ್ಯಾರ್ಥಿಗಳು ಪುಸ್ತಕ ಮೇಳಗಳಿಗೆ ಮಾರು ಹೋಗಿ ಪುಸ್ತಕ ಖರೀದಿಸುವಲ್ಲಿ ಮುಂದಾದರು. ಕಲಾಮೇಳ ಒಂದು ಸುತ್ತ ನೋಡುವುದಾರೆ ಚಿತ್ರಗಳು ಚಿತ್ರ ಸಂತೆಯಂತೆ ಕಲಾ ಚಿತ್ರಗಳು ತೆರೆಮೇಳೆ ಕಂಡು ಬಂದಿರುವುದರಿಂದ ಪ್ರೇಷಕರು ಕಲಾ ಮೇಳ ಕಡೆಗೆ ದಾಪ್ಪುಗಾಲು ಹಾಕಿದರು.
ಕಲಾ ಪ್ರದರ್ಶನ : ಆಳ್ವಾಸ್ ಹೊಸತನ ಹುಡುಕಾಟ ಪರಿಕಲ್ಪನೆಯಲ್ಲಿ ನಾನಾ ಕಲಾ ಪ್ರದರ್ಶನವು ನುಡಿಸಿರಿಯಲ್ಲಿ ಕಂಡುಬಂದವು. ಪುಸ್ತಕದ ಮೇಳಿಗೆ, ಕೃಷಿ, ಬಟ್ಟೆ, ಪೇಂಟಿಗ್ , ವೈವಿಧ್ಯಮಯ ದೇಶಿ ಆಹಾರ- ಖಾದ್ಯ ಮಳಿಗೆ, ಹೀಗೆ ನಾನಾ ರೀತಿಯಿಂದ ಕಲಾ ಪ್ರದರ್ಶನ ಜೊತೆಗೆ ಪ್ರೇಷಕರು ಖರೀದಿಸುವಲ್ಲಿ ಮುಂದಾದರು.
ಲಮಾಣಿ ನೃತ್ಯ: ಆಳ್ವಾಸ್ ನುಡಿಸಿರಿ ೧೨ನೇ ವರ್ಷದ ಕಾಂiiಕ್ರಮದಲ್ಲಿ ಲಮಾಣಿ ಜನರ ಪರಿಚಯ ಬಿಜಾಪುರ ತಾಲೂಕಿನ ಸಿಂದಗಿ ರಸ್ತೆಯ ೨೫ ಜನರು ೨ ವರ್ಷದಿಂದ ನುಡಿಸಿರಿಯಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ ಎಂದು ತಂಡ ನಾಯಕ ಧರ್ಮೊಧನ ಸಿಂಗ್ ರಾತೋಡ್ ಇವರು ಹೇಳಿದರು ಅಷ್ಟು ಮಾತ್ರವಲ್ಲದೆ ರಾಜ್ಯದಲ್ಲಿ ಲಾಮಣಿ ನೃತ್ಯ, ಲಮಾಣಿ ಸಂಗೀತ ಸೇವಾಲಾಲ್ ಸಂಘ ಮೇಳದಿಂದ ನುಡಿಸಿರಿಗೆ ಒಂದು ದಿನ ಮುಂಚಿವಂತವಾಗಿಯೇ ಇಲ್ಲಿಗೆ ಬಂದಿರುತ್ತಾರೆ. ಲಮಾಣಿ ನೃತ್ಯ ಸಂಪ್ರಾದಾಯಿಕ ಪ್ರದರ್ಶನವಾಗಿದೆ, ರಾಜ್ಯದ ಎಲ್ಲ ಕಡೆಗೆ ಪ್ರದರ್ಶ ಮಾಡಿದರು ಯಾರು ಯಾವುದೇ ರೀತಿಯಿಂದ ಪ್ರೊತ್ಸಹ ನೀಡುತ್ತಿಲ್ಲ. ಡಾ. ಮೋಹನ್ ಅಳ್ವ ರವರು ೨ ನೇ ಬಾರಿ ನುಡಿಸಿರಿಗೆ ಆಹ್ವಾನಿಸಿ, ನಮ್ಮ ಜೊತೆ ಕುಣಿದು ಕುಪ್ಪಳಿಸಿ ಪ್ರೇಷಕರು ತಮ್ಮ ತಂಡ ಕಡೆಗೆ ತಿರುಗುವಂತೆ ಮಾಡಿರುವುದು ಒಂದು ಹೆಮ್ಮೆ ವಿಷಯವಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ್ ಆಳ್ವ ರವರು ಆಶ್ರಯದಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಈ ಬಾರಿಯು ಹೊಸತನ ಪರಿಕಲ್ಪನೆಯಲ್ಲಿ ಲಮಾಣಿ ನೃತ್ಯಗಾರ್ತಿಯೊಂದಿಗೆ ಹೊಸ ಹೆಜ್ಜೆ ಹಾಕಿ ಪ್ರೇಷಕರನ್ನು ಮನಸ್ಸು ಸೆಳೆದಾರೆ. ಡಾ. ಮೋಹನ್ ಆಳ್ವರು ೨೦ ನಿಮಿಷಗಳ ಕಾಲ ಹೆಜ್ಜೆ ಹಾಕಿ, ತನ್ನ ಮನಸ್ಸಿಗೆ ಇಷ್ಟವಾದ ಲಮಾಣಿ ನೃತ್ಯಗಾರ್ತಿಯೊಂದಿಗೆ ಹೆಜ್ಜೆ ಹಾಕಿ, ಮುದ್ದು ಮಕ್ಕಳನ್ನು ಮುದ್ದಿಸಿ, ಬಂದಿರುವ ಪ್ರೇಷಕರ ಎಲ್ಲ ಯೋಗ ಕ್ಷೇಮ ವಿಚಾರಿಸಿ ನಂತರ ಅವರು ಆಳ್ವರ ಹತ್ತಿ ಫೋಟೋ ತೆಗೆಸಿಕೊಂಡರು.
ಕೋಲೆ ಬಸವಣ್ಣ : ಕನ್ನಡ ನಾಡು ನುಡಿಯ ಹಬ್ಬವಾಗಿರುವ ಆಳ್ವಾಸ್ ನುಡಿಸಿರಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿ ಕೋಲೆ ಬಸವ ಜನರ ಮೆಚ್ಚಿಗೆ ಪಡೆದಿದೆ. ಮಂಗಳ ವಾದ್ಯ ಮೂಲಕ ನುಡಿಸುತ್ತ ಮತ್ತು ಮಾತಿನ ಮೂಲಕ ಮುಗ ಬಸವನಿಗೆ ಚಾಟ್ಟಿ ಕಳಿಸುವುದರ ಮೂಲಕ ಪ್ರೇಷಕರಿಗೆ ಆಚ್ಚರಿ ಉಂಟುಮಾಡಿಸಿತ್ತು.
ಪುಸ್ತಕ ಪ್ರದರ್ಶನ : ಆಳ್ವಾಸ್ ನುಡಿಸಿರಿಯಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕದ ಮೇಳಿಗೆಯಲ್ಲಿ ಮಕ್ಕಳು ಆಂಗ್ಲ ಭಾಷೆಗೆ ಮಾರು ಹೋಗದಿರಲ್ಲಿ ಎಂಬ ಕಾರಣಕ್ಕೆ ಕನ್ನಡದ ಕಂಪು ಸವಿಯಬೇಕು ಎಂಬ ಕಾರಣಕ್ಕೆ ಸಾಹಿತ್ಯ, ಕವನ ಸಂಕಲನ, ಕಥೆ, ಕಂದಾಬರಿ ಹೀಗೆ ನಾನಾ ಪುಸ್ತಕಗಳು ಮಾರಾಟಕ್ಕೆ ಶೇ. ೫೦ ರಷ್ಟು ರಿಯಾಯಿತಿ ದರ ನಿಗದಿತ ಮಾರಾಟವಾಗಿರುವುದರಿಂದ ಒಂದು ದಿನಕ್ಕೆ ಸಾವಿರಕ್ಕಿಂತ ಅಧಿಕ ಪುಸ್ತಕ ಮಾರಾಟವಾಗಿರುವುದು ಮಾರಾಟಗಾರರಿಗೆ ಹೆಮ್ಮೆಯ ವಿಷಯವಾಗಿದೆ.
ರಾಮಕೃಷ್ಣ.ಕೆ ಶಿಡಿಗಿನಮೊಳ